Sunday, October 22, 2023
ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ
Wednesday, October 18, 2023
ಅಭಿವೃದ್ದಿಗಾಗಿ ಎದುರು ನೋಡುತ್ತಿದೆ: ಶರಣ ಶ್ರೀ ಕುಳುವ ನುಲಿಯ ಚಂದಯ್ಯನವರ ಅವಶೇಷಗಳು
"ಕುಳುವ ವಾಣಿ" ಯ ಸಂದೇಶ......✍️
"ಅಭಿವೃದ್ದಿಗಾಗಿ ಎದುರು ನೋಡುತ್ತಿದೆ ನುಲಿಯ ಚಂದಯ್ಯನವರ ಅವಶೇಷಗಳು"12 ನೇ ಶತಮಾನದಲ್ಲಿ ಬಸವಣ್ಣನವರು ವೈದಿಕ ಧರ್ಮವನ್ನು ಧಿಕ್ಕರಿಸಿ ಕಲ್ಯಾಣ ಕ್ರಾಂತಿ ಮಾಡಿದಾಗ ಅದರಲ್ಲಿ ಪಾಲ್ಗೊಂಡು ಹಲವಾರು ವರ್ಷಗಳ ಕಾಲ ಬಸವ ಧರ್ಮ ಪ್ರಚಾರ ಮಾಡುತ್ತ ಬಸವಣ್ಣನವರ ಲಿಂಗೈಕ್ಯದ ನಂತರವೂ ಶರಣರ ವಚನಗಳನ್ನು ತನ್ನ ಹೆಗಲಿಗೆ ಕಟ್ಟಿಕೊಂಡು, ಕಾಡು ಮೇಡುಗಳಲ್ಲಿ ಅಲೆಯುತ್ತಾ ಕರ್ನಾಟಕದಾದ್ಯಂತ ಸಂಚರಿಸಿ ಬಸವಧರ್ಮ ಪ್ರಚಾರ ಮತ್ತು ಅನ್ನ ದಾಸೋಹ ಮಾಡುತ್ತ ಸಂಚಲನ ಮೂಡಿಸಿದ,
"ಕುಳುವ ಭಾಷೆಯನ್ನಾಡುವ" ನಮ್ಮ ಸಮಾಜದ, ಶರಣ ನುಲಿಯ ಚಂದಯ್ಯನವರು,
ಚಂದಯ್ಯನವರು ಒಮ್ಮೆ ತಮ್ಮ ಇಷ್ಟಲಿಂಗ ಚಂದೇಶ್ವರನ ಸ್ಮರಣೆ ಮಾಡುತ್ತ ಹುಲ್ಲು ಕುಯುತ್ತಾ ತನ್ನ ಕಾಯಕದಲ್ಲಿ ಮಗ್ನರಾಗಿದ್ದಾಗ, ತನ್ನ ಕೊರಳಲ್ಲಿದ್ದ ಇಷ್ಟಲಿಂಗವು ಕಳಚಿ ಬೀಳುತ್ತದೆ, ಕ್ಷಣಕಾಲ ನಿಬ್ಬೆರಗಾದ ಚಂದಯ್ಯ, ಲಿಂಗವನ್ನು ಹುಡುಕುವ ಗೋಜಿಗೆ ಹೋಗದೆ ತನ್ನ ಕಾಯಕವನ್ನು ಮುಂದುವರಿಸುತ್ತಾರೆ, ಸ್ವಲ್ಪ ಸಮಯದ ನಂತರ ಇದನ್ನು ಕಂಡ
"ಮಡಿವಾಳ ಮಾಚಯ್ಯ" ಚಂದಯ್ಯನನ್ನು ಉದ್ದೇಶಿಸಿ ಇಷ್ಟ ಲಿಂಗವೆಲ್ಲಿ..? ಎಂದು ಪ್ರಶ್ನಿಸುತ್ತಾರೆ, ಅದಕ್ಕೆ ಚಂದಯ್ಯನವರು ನನ್ನ ಕಾಯಕ ನಾನು ಮಾಡುತ್ತಿದ್ದೇನೆ, ಲಿಂಗದ ಕಾಯಕ ಲಿಂಗ ಮಾಡಲು ಹೋಗಿದೆ ಎಂದು ನಗುತ್ತಲೇ ಉತ್ತರಿಸುತ್ತಾರೆ, ಈ ಉತ್ತರದಿಂದ ಆಶ್ಚರ್ಯಚಕಿತರಾದ ಮಾಚಯ್ಯ, ಈ ಪ್ರಸಂಗವನ್ನು ಬಸವಣ್ಣನವರಲ್ಲಿಗೆ ಕೊಂಡೊಯ್ಯುತ್ತಾರೆ,ಬಸವಣ್ಣನವರು ಚಂದಯ್ಯನನ್ನು ಉದ್ದೇಶಿಸಿ ಹೇಳುತ್ತಾರೆ, ಅಯ್ಯಾ.. ಶರಣರಿಗೆ, ಜಂಗಮ, ಲಿಂಗ, ದಾಸೋಹ, ಕಾಯ, ವಾಚ, ಮನಸ, ಶುಚಿತ್ವ, ಬಹುಮುಖ್ಯ ಇವನ್ನು ಕಳೆದುಕೊಂಡರೆ ಶರಣರು ಆತ್ಮವಿದ್ದು ಚೈತನ್ಯ ಕಳೆದುಕೊಂಡಂತೆ ದಯಮಾಡಿ ಲಿಂಗವನ್ನು ಮತ್ತೆ ಕೊರಳಲ್ಲಿ ಧರಿಸು ಎನ್ನುತ್ತಾರೆ.
ಇದಕ್ಕೆ ನಯವಾಗಿ ಉತ್ತರಿಸುವ ಚಂದಯ್ಯ, ಶರಣರೇ ಸೂರ್ಯ ಹುಟ್ಟುವಾಗಿನಿಂದ ಹಿಡಿದು ಜಗತ್ತಿಗೆ ಕತ್ತಲು ಆವರಿಸುವವರೆಗೂ, ತಾನು ಮಾಡುವ ಎಲ್ಲಾ ಕಾಯಕದಲ್ಲೂ ಲವಶೇಷವೂ ದೋಷ ಬರದಂತೆ ಎಚ್ಚರವಹಿಸುತ್ತಿದ್ದೇನೆ, ಈ ಲಿಂಗಯ್ಯನ ಪೂಜೆಯಾಗಲಿ, ಈತನಿಗೆ ಅರ್ಪಿಸುವ ದಾಸೋಹಕ್ಕಾಗಲಿ,ಯಾವುದೇ ಲೋಪ ಬರದಂತೆ ನಿಗಾ ವಹಿಸಿದ್ದೇನೆ, ಹೀಗಿರುವಾಗ ಈ ಲಿಂಗಯ್ಯನಿಗೆ ನಾನು ಮಾಡಿದ ತಪ್ಪಾದರೂ ಏನು ...?ಈ ಲಿಂಗಯ್ಯನ ಕಾಯಕವಾದರೂ ಏನು....? ಜಂಗಮಾದಿ ಶರಣರಿಂದಿಡಿದು ಸಕಲ ಪ್ರಾಣಿಗಳ ಹಿತ ಕಾಪಾಡುವುದೇ ಹಾಗಿದೆ ಅಲ್ಲವೇ ಹೀಗಿರುವಾಗ, ಲಿಂಗಯ್ಯ ತನ್ನ ಕಾಯಕ ನಿಷ್ಠೆಯನ್ನು ಮರೆತು, ಎನ್ನ ತೊರೆದು ನನ್ನ ಹಿತವನ್ನು ಮರೆತು ಹೋದವರು, ಲಿಂಗವೇ ಹಾಗಿರಲಿ, ಜಂಗಮನೆ ಹಾಗಿರಲಿ, ಸಾಮಾನ್ಯನೆ ಹಾಗಿರಲಿ ನನಗೆ ಎಲ್ಲರೂ ಒಂದೇ, ನಾನೂ ಲಿಂಗವನ್ನು ಮರು ಧರಿಸಲಾರೆ ಎಂದು ತಿರಸ್ಕರಿಸಿ ಬಿಡುತ್ತಾರೆ, ನಂತರ ಬಸವಾದಿ ಅನೇಕ ಶರಣರ ಒತ್ತಾಯದ ಮೇರೆಗೆ ಮಣಿದು ಚಂದಯ್ಯ ಲಿಂಗ ಧಾರಣೆ ಮಾಡುತ್ತಾರೆ,
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ. ಇಷ್ಟು ಗಮನಾರ್ಹ ವಿಷಯ ನಡೆಯುತ್ತಿದ್ದರೂ ಚಂದಯ್ಯನವರು ಒಂದು ಕ್ಷಣವೂ ಸುಮ್ಮನಿರದೆ ತನ್ನ ನುಲಿಯುವ ಕಾಯಕವನ್ನು ಮಾಡುತ್ತಲೇ ಇರುತ್ತಾರೆ. ನುಲಿಯ ಚಂದಯ್ಯ ಹಾಗೂ ಇನ್ನೊಬ್ಬ ಶರಣ ಆಯ್ದಕ್ಕಿ ಮಾರಯ್ಯನ ಕಾಯಕ ನಿಷ್ಠೆಯನ್ನು ಕಂಡ ಬಸವಣ್ಣನವರು, ಒಂದು ವಾಕ್ಯವನ್ನು ಉದ್ಗರಿಸುತ್ತಾರೆ. ಅದೇ ಕಾಯಕವೇ ಕೈಲಾಸ ಈ ಮಾತು ಬಸವಣ್ಣನವರಿಂದ ಬಂತು
(ಮತ್ತೊಂದು ಕಥೆಯಲ್ಲಿ ಲಿಂಗನ ಕೈಯ್ಯಲ್ಲಿ ಚಂದಯ್ಯ ಕಾಯಕ ಮಾಡಿಸಿ, ನಂತರ ಲಿಂಗ ಧಾರಣೆ ಮಾಡುತ್ತಾರೆ ಎಂದಿದೆ)
ಇದನ್ನು ನಾನು ಇಲ್ಲಿ ಒಪ್ಪುವುದಿಲ್ಲ ಕಾರಣ ಬಸವಣ್ಣನವರು ವೈದಿಕ ಧರ್ಮದ, ಮೂರ್ತಿ ಪೂಜೆಯನ್ನು, ಅವತಾರವನ್ನು, ದೇವರು ಮೈಮೇಲೆ ಬರುವುದನ್ನು , ಆಚಾರ ವಿಚಾರಗಳನ್ನು ದಿಕ್ಕರಿಸಿದವರು,
ಇಷ್ಟ ಲಿಂಗವನ್ನು ಕುರುಹಾಗಿಟ್ಟುಕೊಂಡು ಆತ್ಮೋನ್ನತ ಪೂಜೆಯನ್ನು ಒಪ್ಪಿದವರು, ಬಸವಣ್ಣನವರು,ಆ ಪ್ರಸಂಗದಲ್ಲಿ. ಲಿಂಗ ಮಾನವ ರೂಪ ತಾಳಿ ಕಾಯಕ ಮಾಡಿದೆ ಎಂದಿದೆ....ಇದನ್ನು ನಾವು ಒಪ್ಪಿದರೆ ಬಸವಣ್ಣನವರ ಆದರ್ಶಗಳು ಮತ್ತು ತತ್ವಗಳನ್ನು ದುರ್ಬಲಗೊಳಿಸಿದಂತಾಗುತ್ತದೆ, ಮತ್ತು ನಾವೇ ಸ್ವಯಂ ಮೌಢ್ಯಚರಣೆ ಮಾಡಿದಂತಾಗುತ್ತೆ,
ಈ ಪ್ರಸಂಗ ನಡೆದ ಸ್ಥಳ ಹೂಳಲ್ಕೆರೆ ತಾಲೂಕು ನುಲೇನೂರು ಗ್ರಾಮ ಈ ಗ್ರಾಮ ಅಭಿವೃದ್ದಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿದೆ, ಲಿಂಗ ಜಾರಿದ ಸ್ಥಳ ರಾಮತೀರ್ಥ. ಈಗ ಬಟಾ ಬಯಲಾಗಿದೆ,ಈ ಗ್ರಾಮದಲ್ಲಿ ಅಭಿವೃದ್ದಿ, ಮರಿಚಿಕೆಯಾಗಿದೆ,ಕುಳುವ ಭಾಷೆಯನ್ನಾಡುವ ಸಮುದಾಯಗಳ ಕಾಯಕ ನಿಷ್ಠೆಯನ್ನು ಜಗತ್ತಿಗೆ ಪರಿಚಯಿಸಿದ, ಇಂತಹ ಶರಣರ ಪುಣ್ಯಸ್ಥಳಗಳು ಅವನತಿ ಅಂಚಿಗೆ ಸರಿದಿರುವುದು..! ಇವುಗಳನ್ನು ಸರ್ಕಾರ ಗಮನಿಸದೆ ಇರುವುದು ನಿಜಕ್ಕೂ ವಿಪರ್ಯಾಸ..?
ಆತ್ಮೀಯ ಕುಳುವ ಬಂಧುಗಳೇ.... ಬನ್ನಿ ನಮ್ಮ ಸಮಾಜದ ಸರ್ವ ಶ್ರೇಷ್ಠ ಶರಣ ನುಲಿಯ ಚಂದಯ್ಯ ನವರ ಸ್ಥಳಗಳನ್ನು ಪುನರುಜ್ಜೀವನಗೊಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸೋಣ....! ಸಂಘಟಿತರಾಗೋಣ.....!
ಮುಂದಿನ ಭಾಗದಲ್ಲಿ ಚಂದಯ್ಯನವರ ಮತ್ತಷ್ಟು ಸ್ಥಳಗಳನ್ನು ಪರಿಚಯಿಸುತ್ತೇನೆ.
ಮುಂದುವರಿಯುತ್ತದೆ....✍️
ಗುರುವಲ್ಲದ ಗುರು ಪಡೆದದ್ದು ಕೇವಲ ದಕ್ಷಿಣೆ ಅಲ್ಲ ತುಳಿತಕ್ಕೊಳಗಾದವರ ಬದುಕು
Monday, October 16, 2023
ಕುಳುವ ವಾಣಿ ಪರಿಚಯ
Sunday, October 15, 2023
"ಏಕಲವ್ಯ ಕೊಟ್ಟಿದ್ದು ಕೇವಲ ಬೆರಳಲ್ಲ, ಗುರುವಲ್ಲದ ಗುರು ಎನಿಸಿಕೊಂಡ ದ್ರೋಣಾಚಾರ್ಯರು ಪಡೆದದ್ದು ಕೇವಲ ದಕ್ಷಿಣೆಯಲ್ಲ"
Thursday, October 12, 2023
ಅಲೆಮಾರಿ ಸಮುದಾಯಗಳಲ್ಲಿ ಕೊರಮ-ಕೊರಚ ಭಾಗ-2
Wednesday, October 11, 2023
ಅಲೆಮಾರಿ ಸಮುದಾಯಗಳಲ್ಲಿ ಕೊರಮ - ಕೊರಚ
ಕುಳುವ ವಾಣಿ ಸಂದೇಶ....✍️
ಅಲೆಮಾರಿ |
ಅಲೆಮಾರಿ ಬುಡಕಟ್ಟು ಜನಾಂಗದ ಸ್ಥಿತಿ,ಗತಿ, ಕಲೆ, ಸಂಸ್ಕೃತಿ, ಜೀವನಶೈಲಿ, ಅನಾವರಣಗೊಳಿಸುವ ನಿಟ್ಟಿನಲ್ಲಿ ಒಂದು ಇಣುಕುನೋಟ,
ಇದುವೇ #ಕುಳುವ_ವಾಣಿಯ ಉದ್ದೇಶ...
ಬುಡಕಟ್ಟು ಅಲೆಮಾರಿ ಸಮುದಾಯಗಳಲ್ಲಿ ಆರ್ಥಿಕ ಬಡತನವಿದೆ, ಆದರೆ ಸಾಂಸ್ಕೃತಿಕ ಶ್ರೀಮಂತಿಕೆ ಅಪಾರವಾಗಿ ಚಿಮ್ಮುತ್ತಿದೆ,, ವಿಶ್ವದಾದ್ಯಂತ ಸಾಂಸ್ಕೃತಿಕ ರಾಯಭಾರಿಯಂತೆ ಹೆಸರು ಮಾಡಿದ್ದರು,, ಈಗಲೂ ಬಡತನದ ಬೇಗೆ, ಅಸ್ಪೃಶ್ಯತೆ, ಅಸಮಾನತೆ, ಉದ್ಯೋಗ, ಶಿಕ್ಷಣ, ಆರ್ಥಿಕ, ವಂಚಿತ ಸಮುದಾಯಗಳಲ್ಲಿ ಒಂದು ಸಮುದಾಯವೇ....
ಕುಳುವ ಭಾಷೆಯನ್ನು(ಲಿಪಿ ಇಲ್ಲದ) ಮಾತೃಭಾಷೆಯನ್ನಾಗಿ ಮಾಡಿಕೊಂಡು, ಮೂಲ ಸಂಸ್ಕೃತಿಯನ್ನು ತನ್ನ ಒಡಲಾಳದಲ್ಲಿ ಚಿನ್ನದ ಗಣಿಯಂತೆ ಇಟ್ಟುಕೊಂಡು,, ಅಭಿವೃದ್ಧಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿರುವ #ಕೊರಚ #ಕೊರಮ ಸಮುದಾಯ..!
ಈ ಸಮುದಾಯ ದೇಶಾದ್ಯಂತ ನೆಲೆಗೊಂಡಿದ್ದು, ಆಯಾಯ ರಾಜ್ಯದಲ್ಲಿ ,ಆಯಾಯ ಸಂಸ್ಕೃತಿ, ಕಲೆ, ಭಾಷೆ, ಜೀವನ ಶೈಲಿಯ ಜೊತೆಗೆ ತಮ್ಮ ಮೂಲ ಸಂಸ್ಕೃತಿಯನ್ನು, ಬೆರೆಸಿಕೊಂಡು ಬದುಕು ಕಟ್ಟಿಕೊಂಡಿವೆ,
ಮೂಲತಃ ಕರ್ನಾಟಕದಲ್ಲಿ ಕೊರಚ ಕೊರಮ ಸಮುದಾಯಗಳು 100% ನಲ್ಲಿ 10% ರಷ್ಟು ಪಟ್ಟಣಗಳಲ್ಲಿ ಅಭಿವೃದ್ಧಿ ಹೊಂದಿರುವುದು ಬಿಟ್ಟರೆ,, ಮಿಕ್ಕ 90% ಜನರು ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ, ನದಿ ದಡದಲ್ಲಿ, ಮತ್ತು ಕಾಡಂಚಿನಲ್ಲಿ, ಈಗಲೂ ಅವಕಾಶ ವಂಚಿತರಾಗಿ ವಾಸಿಸುತ್ತಿದ್ದಾರೆ,,,!
ಈ ಸಮುದಾಯದ ಜನ ಒಂದೇ ವೃತ್ತಿಯನ್ನು ಅವಲಂಬಿಸದೆ, ಅನೇಕ ವೃತ್ತಿಗೆ ಜೋತುಬಿದ್ದು ಎಲ್ಲಾ ವೃತ್ತಿಯಲ್ಲೂ ಪರಿಣಿತಿ ಹೊಂದಿರುವುದು, ವಿಶೇಷವೇ ಸರಿ,...
ಈ ಸಮುದಾಯದ ಕೆಲವು ವೃತ್ತಿಗಳು ಹೀಗಿವೆ,
ಬಿದಿರಿನ ಕೆಲಸ ಮಾಡುವುದು, ಬುಟ್ಟಿ, ಮೊರ, ಮಂಕರಿ, ಬಿದಿರಿನ ಚಾಪೆ, ರೇಷ್ಮೆ ತಟ್ಟೆ (ಚಂದ್ರಿಕೆ) ಹಂದಿ ಸಾಕಾಣಿಕೆ, ಬಾಜ ಭಜಂತ್ರಿ ಬಾರಿಸುವುದು, ಕಣಿ ಹೇಳುವುದು, ಬೀದಿ ಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ...!
ಪಟ್ಟಣಗಳಲ್ಲಿ ಅಭಿವೃದ್ಧಿ ಹೊಂದಿದ ಈ ಸಮುದಾಯದ ಜನ ಸರ್ಕಾರಿ ಕೆಲಸಗಳು, ಸೇನೆಯಲ್ಲಿ ಸೇವೆ ಸಲ್ಲಿಸುವುದು, ಮತ್ತಿತರ ಕೆಲಸಗಳನ್ನು ಮಾಡಿಕೊಂಡಿದ್ದಾರೆ,,
ಹಾಗೂ ವಿಶೇಷವಾಗಿ ಸಂಗೀತ ಕ್ಷೇತ್ರಗಳಲ್ಲಿ #ಸನಾದಿ_ಅಪ್ಪಣ್ಣ ರಂಥ ದಿಗ್ಗಜರನ್ನು ಕಾಣಿಕೆಯಾಗಿ ಕೊಟ್ಟಂತ ಹೆಗ್ಗುರುತು ಈ ಸಮಾಜಕ್ಕಿದೆ,, ಈ ಸಮುದಾಯ ಭಾರತದ ಮೂಲನಿವಾಸಿಗಳಾಗಿದ್ದು, ರಾಮಾಯಣ-ಮಹಾಭಾರತ ಕಥೆಗಳಲ್ಲಿ ಸಮುದಾಯದ ಉಲ್ಲೇಖವಿರುವುದು ಕಾಣಸಿಗುತ್ತದೆ,, "ವಾತ್ಸವದ ಗುರು", ಅಲ್ಲದಿದ್ದರೂ ಮಾನಸಿಕ "ಗುರುವಿಗೆ", ಗುರು ಕಾಣಿಕೆಯಾಗಿ ಹೆಬ್ಬೆರಳನ್ನು ಕೊಟ್ಟ #ಏಕಲವ್ಯ ಈ ಸಮುದಾಯದ ಒಬ್ಬ ಮಹಾನ್ ವ್ಯಕ್ತಿ,,!
12ನೇ ಶತಮಾನದಲ್ಲಿ ಶರಣ ಕ್ರಾಂತಿ ಮತ್ತು ಬಸವಣ್ಣನವರ ಲಿಂಗೈಕದ ನಂತರವೂ ಬಸವತತ್ವ, ಕಾಯಕ-ದಾಸೋಹ ಜಂಗಮ ನಿಷ್ಠೆಯನ್ನು ಜಗತ್ತಿಗೆ ತೋರಿಸಿದ ಕಾಯಕಯೋಗಿ #ನುಲಿಯ_ಚಂದಯ್ಯ ಈ ಸಮುದಾಯದ ಮಹಾನ್ ಶರಣ...!
ಹಾಗೆಯೇ ಬ್ರಿಟಿಷ್ ಸಾಮ್ರಾಜ್ಯವನ್ನೇ ಎದುರುಹಾಕಿಕೊಂಡು, ಉಳ್ಳವರಿಂದ ಕಸಿದು ವಂಚಿತರಿಗೆ ಸಹಾಯ ಮಾಡುತ್ತಾ, ಶೋಷಿತರ ಭೂಮಿ, ವಡವೆ, ಮನೆ, ಮಠವನ್ನು, ಹಿಂತಿರುಗಿಸಿ ಬ್ರಿಟಿಷರಿಗೆ ತಲೆನೋವಾಗಿದ್ದ #ಕ್ರಾಂತಿವೀರ_ಕನ್ನೇಶ್ವರ_ರಾಮ ಈ ಸಮುದಾಯದ ಒಬ್ಬ ವ್ಯಕ್ತಿ...!
ಈ ಸಮುದಾಯದಲ್ಲಿ ಇಷ್ಟೊಂದು ದಿಗ್ಗಜರು ಇದ್ದರೂ, ಈ ಜನ ಇಷ್ಟೊಂದು ಕಸುಬುಗಳಲ್ಲಿ ನಿರತರಾಗಿದ್ದರು, ಇಷ್ಟೊಂದು ಚಾಣಾಕ್ಷತನ ವಿದ್ದರೂ, ಪ್ರಜಾಪ್ರಭುತ್ವ ಬಂದು 70 ವರ್ಷವಾದರೂ, ಶೋಷಿತರಿಗೆ ಇಂದು ಸೂಕ್ತ ಪ್ರಾತಿನಿಧ್ಯ ಸಿಗುತ್ತಿದ್ದರು, ಇನ್ನೂ ಕೂಡ ಈ ಸಮುದಾಯ ವಂಚಿತರ ಪಟ್ಟಿಯಲ್ಲಿ ಉಳಿದುಕೊಂಡಿರುವುದು ಏಕೆ..? ಎಂಬ ಕಾರಣ ಹುಡುಕುತ್ತಾ ಹೋದರೆ ಸಿಗುವುದು 1 ಅಥವಾ 2 ಕಾರಣಗಳಲ್ಲ ನೂರಾರು ಕಾರಣಗಳು...?
ಈ ಸಮುದಾಯದ ಕಲೆ-ಸಂಸ್ಕೃತಿ-ಜೀವನಶೈಲಿ ಮತ್ತು ಶಿಕ್ಷಣ, ಸಾಮಾಜಿಕ, ಆರ್ಥಿಕತೆಯಿಂದ, ಇವರೇಕೆ ವಂಚಿತರಾಗಿದ್ದಾರೆ ಎಂಬ ಕಾರಣ, ಹಾಗೂ ಸರ್ಕಾರದಿಂದ ಈ ಸಮುದಾಯಕ್ಕೆ ಇರುವ ಸೌಲಭ್ಯಗಳು ಅದನ್ನು ಪಡೆಯುವ ಬಗೆ ಇವೆಲ್ಲವನ್ನು...
ಎಳೆ ಎಳೆಯಾಗಿ... ನಿಮ್ಮ ಮುಂದಿಡುತ್ತೇನೆ,,
ಮುಂದಿನ ಸಂಚಿಕೆಗಳಲ್ಲಿ.....
#ಶ್ರೀಕಾಂತ್_ಕುಳುವ
ಅಲೆಮಾರಿ
*ಕುಳುವ ವಾಣಿಯ ಸಂದೇಶ*
ಆತ್ಮೀಯರೇ.....✍️
*ಕರ್ನಾಟಕದಲ್ಲಿ ಮೂಲನಿವಾಸಿ ಅಲೆಮಾರಿ ಸಮುದಾಯಗಳು*
ಕರ್ನಾಟಕ ರಾಜ್ಯದಲ್ಲಿ
ಅನೇಕ ಶತಮಾನಗಳ ಹಿಂದೆಯಿಂದಲೂ ಅಲೆಮಾರಿ ಜೀವನ ನಡೆಸುವ ಕೆಲವು ಜನಾಂಗಗಳಿವೆ.👇 *ಲಂಬಾಣಿ,ಮಣ್ಣುಒಡ್ಡರು, ಕೊರಚ,ಕೊರಮ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂಡಿಜೋಗಿ, ಸೋಲಿಗರು, ಇರುಳಿಗರು,ಯರವರು,ಸಿಂದೊಳ್ಳು, ದಕ್ಕಲಿಗರು, ಚನ್ನ ದಾಸರು, ಕಾಡು ಕುರುಬರು, ಹಕ್ಕಿಪಿಕ್ಕಿ, ಗೋಂಧಳಿ, ಸಿಕ್ಕಿಗರ,* ಇನ್ನೂ ಮುಂತಾದ ಸಮುದಾಯದವರೂ ಈಗಲೂ ಅಲೆಮಾರಿ ಜೀವನವನ್ನೇ ಅವಲಂಬಿಸಿದ್ದಾರೆ.
ಇತ್ತೀಚೆಗೆ ಈ ಜನಾಂಗದ ಸಮುದಾಯದವರು ಸ್ಥಿರಜೀವನ ನಡೆಸಲು,
ಸರ್ಕಾರವು ವಸತಿ ಮತ್ತು ಸಣ್ಣಪುಟ್ಟ ಕೈಗಾರಿಕೆ, ಸಣ್ಣ ಉದ್ಯಮ, ದೊಡ್ಡ ಉದ್ಯಮ, ಹಾಗೂ ಅನೇಕ ರೀತಿಯ ಅನುದಾನಗಳನ್ನು ಬಿಡುಗಡೆ ಮಾಡುವ ಮುಖಾಂತರ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ.
ಆದರೆ....🤔
ಅದು ಸರಿಯಾಗಿ ಅವರಿಗೆ ತಲುಪದೆ ಈ ಜನಾಂಗದವರೂ ಈಗಲೂ ಅಲೆಯುವುದನ್ನು ಸಂಪುರ್ಣ ಬಿಟ್ಟಿಲ್ಲ. ಜೊತೆಗೆ ಭಾರತ ದೇಶದ ಪುರಾಣಗಳಿಗೆ, ಮೂಲ ಸಂಸ್ಕೃತಿಗಳಿಗೆ ಪ್ರತಿಕ್ಷಣವೂ ಜೀವವನ್ನು ತುಂಬುತ್ತಾ. ತಮ್ಮ
ಜೀವನೋಪಾಯಕ್ಕಾಗಿ ಊರಿಂದ ಊರಿಗೆ ಗುಳೆ ಹೊರಟು ಅಲೆಯುವ ಈ ಜನ ಏನಾದರೊಂದು ಕಸುಬನ್ನು ಅವಲಂಬಿಸಿಯೇ ಇರುತ್ತಾರೆ.
*ಉದಾಹರಣೆಗಾಗಿ:-* ಲಂಬಾಣಿಗಳು ಮೊದಲಿಗೆ ಉಪ್ಪು, ಕಾಳು ಮೆಣಸು, ಜೀರಿಗೆ ಯಂತ ಉಪಯುಕ್ತ ವಸ್ತುಗಳನ್ನು ತಲೆಯ ಮೇಲೆ ಹಾಗೂ ಎತ್ತುಗಳ ಮತ್ತು ಕತ್ತೆಗಳ ಮೇಲೆ ಸಾಗಿಸಿ, ಮಾರಾಟ ಮಾಡಲು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಿದ್ದರು.
ಈಗಲೂ ಅವರು ಬೇರೆ ಜನರೊಂದಿಗೆ ಸೇರದೆ, ಪ್ರತ್ಯೇಕ ತಾಂಡಗಳನ್ನು ನಿರ್ಮಿಸಿಕೊಂಡು ವ್ಯವಸಾಯ ಮಾಡುತ್ತಾರೆ. ಲಂಬಾಣಿ ಹೆಂಗಸರು ಗುಡ್ಡಗಾಡಿನಲ್ಲಿ ಸೌದೆ, ಹಣ್ಣುಹಂಪಲನ್ನು ಕೂಡಿಟ್ಟು, ಹಳ್ಳಿಗಳಲ್ಲಿ ಮಾಡಿ ಹಣ,ಧಾನ್ಯ ಸಂಪಾದಿಸುತ್ತಾರೆ.
ಡೊಂಬರು ಅನೇಕ ತರದ ತಮಾಷೆ ಆಟಗಳನ್ನು ಜನರಿಗೆ ತೋರಿಸುತ್ತ ಊರಿಂದೂರಿಗೆ ಗುಂಪುಗಳಲ್ಲಿ ಅಲೆಯುತ್ತ ಅನ್ನ ಬಟ್ಟೆ ಸಂಪಾದಿಸುತ್ತಾರೆ. ಹಾವಾಡಿಗರೂ ಹಾಗೆಯೇ ಕಿಳ್ಳೇಕ್ಯಾತರೂ (ಶಿಳ್ಳೆಕ್ಯಾತ) ಬೊಂಬೆ ಆಟ ಆಡಿಸುತ್ತಾರೆ; ಅಲ್ಲದೆ ರಾಮಾಯಣ, ಮಹಾಭಾರತದಿಂದ ಆರಿಸಿದ ಕಥಾವಸ್ತುಗಳನ್ನು ಬಯಲಾಟ ರೂಪದಲ್ಲಿ ಆಡಿ ಭಾರತದ ಪುರಾಣ ಸಂಸ್ಕೃತಿಯನ್ನು ಈಗಲೂ ಉಳಿಸುತ್ತಿದ್ದಾರೆ. ಹಳ್ಳಿಗರಿಗೆ ಮನರಂಜನೆ ಒದಗಿಸುತ್ತಾರೆ.
ಇವರ ಹೆಂಗಸರು ಹಚ್ಚೆ (ಹಸುರು) ಹಾಕುತ್ತಾರೆ,
ಇನ್ನು *ಕೊರಚ ಕೊರಮ* (ಕುಳುವ) ಸಮುದಾಯದವರು
ಹಂದಿ ಸಾಕುತ್ತಾರೆ, ಮೊರ,ಪುಟ್ಟಿ,ಮಂಕರಿಯಂತ ಬಿದಿರಿನಿಂದ ಉಪಯುಕ್ತ ವಸ್ತುಗಳನ್ನು ಹೇಣೆಯುವುದು, ಬೆತ್ತದ ಕೆಲಸ ಮಾಡುವುದು, ಬೊಂಬಿನ ಕೆಲಸ ಮಾಡುವುದು, ಮತ್ತು ಕೊರವಂಜಿಗಳಾಗಿ ಭವಿಷ್ಯ ಹೇಳುತ್ತಾ. ಈಗಲೂ ಒಂದು ಊರಿನಲ್ಲಿ ಸ್ಥಳಾವಕಾಶವಿಲ್ಲದೆ ಸೂಕ್ತ ವಸತಿ ಇಲ್ಲದೆ ಊರಿಂದ ಊರಿಗೆ ಅಲೆಯುತ್ತ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ
ಇವರ ಒಂದೊಂದೇ ಸಮುದಾಯಗಳ ಮೂಲ ಕಲೆ, ಸಂಸ್ಕೃತಿ, ಜೀವನಶೈಲಿ, ಬದುಕು, ನಿರ್ವಹಣೆ ಸ್ಥಿತಿಗತಿಗಳ, ಅನಾವರಣಗೊಳಿಸಬೇಕಿದೆ,, ಸರ್ಕಾರದ ಕಣ್ಣು ತೆರೆಸಬೇಕಿದೆ, ಇವರೆಲ್ಲರ ಮನೆಮನೆಗೂ ಮೂಲಸೌಕರ್ಯ, ಒದಗಿಸಬೇಕಿದೆ,
ಈ ಸಮುದಾಯಗಳೆಲ್ಲವನ್ನು ಶೈಕ್ಷಣಿಕವಾಗಿ, ಉದ್ಯೋಗಿಕವಾಗಿ,ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸ್ಥಾನಮಾನಗಳನ್ನು ಕೊಟ್ಟು ಮುಖ್ಯ ವಾಹಿನಿಗೆ ತರಬೇಕಿದೆ
ಬನ್ನಿ *ಕುಳುವ ವಾಣಿ* ಯಲ್ಲಿ ಅಲೆಮಾರಿಗಳ ಒಂದೊಂದೇ ಸಮುದಾಯದ ಕಥೆಗಳನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.
Community
ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ
ಬೆಂಗಳೂರು ನಗರ:- 28/09/2023 :ಹಲಸೂರು ಗೇಟ್ ಇನ್ಸ್ಪೆಕ್ಟರ್ ಹನಮಂತ ಕೆ ಭಜಂತ್ರಿ ಹಾಗೂ ಠಾಣೆ ಪೊಲೀಸರು ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ ಇಬ್ಬರನ್ನ...
-
ಕುಳುವ ವಾಣಿ ಸಂದೇಶ....✍️ ಭಾಗ:- 2 ಅಲೆಮಾರಿ ಬುಡಕಟ್ಟು ಜನಾಂಗದ ಸ್ಥಿತಿ,ಗತಿ, ಕಲೆ, ಸಂಸ್ಕೃತಿ, ಜೀವನಶೈಲಿ, ಅನಾವರಣಗೊಳಿಸುವ ನಿಟ್ಟಿನಲ್ಲಿ ಒಂದು ಇಣುಕ...
-
"ಕುಳುವ ವಾಣಿ" ಯ ಸಂದೇಶ......✍️ "ಅಭಿವೃದ್ದಿಗಾಗಿ ಎದುರು ನೋಡುತ್ತಿದೆ ನುಲಿಯ ಚಂದಯ್ಯನವರ ಅವಶೇಷಗಳು" 12 ನೇ ಶತಮಾನದಲ್ಲಿ ಬಸವಣ...
-
ಕುಳುವ ವಾಣಿ ಸಂದೇಶ...✍️ "ಏಕಲವ್ಯ ಕೊಟ್ಟಿದ್ದು ಕೇವಲ ಬೆರಳಲ್ಲ, ಗುರುವಲ್ಲದ ಗುರು ಎನಿಸಿಕೊಂಡ ದ್ರೋಣಾಚಾರ್ಯರು ಪಡೆದದ್ದು ಕೇವಲ ದಕ್ಷಿಣೆಯಲ್ಲ... ...