Wednesday, October 11, 2023

ಅಲೆಮಾರಿ

 *ಕುಳುವ ವಾಣಿಯ ಸಂದೇಶ* 



ಆತ್ಮೀಯರೇ.....✍️


*ಕರ್ನಾಟಕದಲ್ಲಿ ಮೂಲನಿವಾಸಿ ಅಲೆಮಾರಿ ಸಮುದಾಯಗಳು*


ಕರ್ನಾಟಕ ರಾಜ್ಯದಲ್ಲಿ

ಅನೇಕ ಶತಮಾನಗಳ ಹಿಂದೆಯಿಂದಲೂ ಅಲೆಮಾರಿ ಜೀವನ ನಡೆಸುವ ಕೆಲವು ಜನಾಂಗಗಳಿವೆ.👇 *ಲಂಬಾಣಿ,ಮಣ್ಣುಒಡ್ಡರು, ಕೊರಚ,ಕೊರಮ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂಡಿಜೋಗಿ, ಸೋಲಿಗರು, ಇರುಳಿಗರು,ಯರವರು,ಸಿಂದೊಳ್ಳು, ದಕ್ಕಲಿಗರು, ಚನ್ನ ದಾಸರು, ಕಾಡು ಕುರುಬರು, ಹಕ್ಕಿಪಿಕ್ಕಿ, ಗೋಂಧಳಿ, ಸಿಕ್ಕಿಗರ,* ಇನ್ನೂ ಮುಂತಾದ ಸಮುದಾಯದವರೂ ಈಗಲೂ ಅಲೆಮಾರಿ ಜೀವನವನ್ನೇ ಅವಲಂಬಿಸಿದ್ದಾರೆ.


ಇತ್ತೀಚೆಗೆ ಈ ಜನಾಂಗದ ಸಮುದಾಯದವರು ಸ್ಥಿರಜೀವನ ನಡೆಸಲು, 


ಸರ್ಕಾರವು ವಸತಿ ಮತ್ತು ಸಣ್ಣಪುಟ್ಟ ಕೈಗಾರಿಕೆ, ಸಣ್ಣ ಉದ್ಯಮ, ದೊಡ್ಡ ಉದ್ಯಮ, ಹಾಗೂ ಅನೇಕ ರೀತಿಯ ಅನುದಾನಗಳನ್ನು ಬಿಡುಗಡೆ ಮಾಡುವ ಮುಖಾಂತರ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. 


ಆದರೆ....🤔

ಅದು ಸರಿಯಾಗಿ ಅವರಿಗೆ ತಲುಪದೆ ಈ ಜನಾಂಗದವರೂ ಈಗಲೂ ಅಲೆಯುವುದನ್ನು ಸಂಪುರ್ಣ ಬಿಟ್ಟಿಲ್ಲ. ಜೊತೆಗೆ ಭಾರತ ದೇಶದ ಪುರಾಣಗಳಿಗೆ, ಮೂಲ ಸಂಸ್ಕೃತಿಗಳಿಗೆ ಪ್ರತಿಕ್ಷಣವೂ ಜೀವವನ್ನು ತುಂಬುತ್ತಾ. ತಮ್ಮ

ಜೀವನೋಪಾಯಕ್ಕಾಗಿ ಊರಿಂದ ಊರಿಗೆ ಗುಳೆ ಹೊರಟು ಅಲೆಯುವ ಈ ಜನ ಏನಾದರೊಂದು ಕಸುಬನ್ನು ಅವಲಂಬಿಸಿಯೇ ಇರುತ್ತಾರೆ. 


*ಉದಾಹರಣೆಗಾಗಿ:-* ಲಂಬಾಣಿಗಳು ಮೊದಲಿಗೆ ಉಪ್ಪು, ಕಾಳು ಮೆಣಸು, ಜೀರಿಗೆ ಯಂತ ಉಪಯುಕ್ತ ವಸ್ತುಗಳನ್ನು ತಲೆಯ ಮೇಲೆ ಹಾಗೂ ಎತ್ತುಗಳ ಮತ್ತು ಕತ್ತೆಗಳ ಮೇಲೆ ಸಾಗಿಸಿ, ಮಾರಾಟ ಮಾಡಲು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಿದ್ದರು. 


ಈಗಲೂ ಅವರು ಬೇರೆ ಜನರೊಂದಿಗೆ ಸೇರದೆ, ಪ್ರತ್ಯೇಕ ತಾಂಡಗಳನ್ನು ನಿರ್ಮಿಸಿಕೊಂಡು ವ್ಯವಸಾಯ ಮಾಡುತ್ತಾರೆ. ಲಂಬಾಣಿ ಹೆಂಗಸರು ಗುಡ್ಡಗಾಡಿನಲ್ಲಿ ಸೌದೆ, ಹಣ್ಣುಹಂಪಲನ್ನು ಕೂಡಿಟ್ಟು, ಹಳ್ಳಿಗಳಲ್ಲಿ ಮಾಡಿ ಹಣ,ಧಾನ್ಯ ಸಂಪಾದಿಸುತ್ತಾರೆ. 

ಡೊಂಬರು ಅನೇಕ ತರದ ತಮಾಷೆ ಆಟಗಳನ್ನು ಜನರಿಗೆ ತೋರಿಸುತ್ತ ಊರಿಂದೂರಿಗೆ ಗುಂಪುಗಳಲ್ಲಿ ಅಲೆಯುತ್ತ ಅನ್ನ ಬಟ್ಟೆ ಸಂಪಾದಿಸುತ್ತಾರೆ. ಹಾವಾಡಿಗರೂ ಹಾಗೆಯೇ ಕಿಳ್ಳೇಕ್ಯಾತರೂ (ಶಿಳ್ಳೆಕ್ಯಾತ) ಬೊಂಬೆ ಆಟ ಆಡಿಸುತ್ತಾರೆ; ಅಲ್ಲದೆ ರಾಮಾಯಣ, ಮಹಾಭಾರತದಿಂದ ಆರಿಸಿದ ಕಥಾವಸ್ತುಗಳನ್ನು ಬಯಲಾಟ ರೂಪದಲ್ಲಿ ಆಡಿ ಭಾರತದ ಪುರಾಣ ಸಂಸ್ಕೃತಿಯನ್ನು ಈಗಲೂ ಉಳಿಸುತ್ತಿದ್ದಾರೆ. ಹಳ್ಳಿಗರಿಗೆ ಮನರಂಜನೆ ಒದಗಿಸುತ್ತಾರೆ.

ಇವರ ಹೆಂಗಸರು ಹಚ್ಚೆ (ಹಸುರು) ಹಾಕುತ್ತಾರೆ,

ಇನ್ನು *ಕೊರಚ ಕೊರಮ* (ಕುಳುವ) ಸಮುದಾಯದವರು

ಹಂದಿ ಸಾಕುತ್ತಾರೆ, ಮೊರ,ಪುಟ್ಟಿ,ಮಂಕರಿಯಂತ ಬಿದಿರಿನಿಂದ ಉಪಯುಕ್ತ ವಸ್ತುಗಳನ್ನು ಹೇಣೆಯುವುದು, ಬೆತ್ತದ ಕೆಲಸ ಮಾಡುವುದು, ಬೊಂಬಿನ ಕೆಲಸ ಮಾಡುವುದು, ಮತ್ತು ಕೊರವಂಜಿಗಳಾಗಿ ಭವಿಷ್ಯ ಹೇಳುತ್ತಾ. ಈಗಲೂ ಒಂದು ಊರಿನಲ್ಲಿ ಸ್ಥಳಾವಕಾಶವಿಲ್ಲದೆ ಸೂಕ್ತ ವಸತಿ ಇಲ್ಲದೆ ಊರಿಂದ ಊರಿಗೆ ಅಲೆಯುತ್ತ ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ


ಇವರ ಒಂದೊಂದೇ ಸಮುದಾಯಗಳ ಮೂಲ ಕಲೆ, ಸಂಸ್ಕೃತಿ, ಜೀವನಶೈಲಿ, ಬದುಕು, ನಿರ್ವಹಣೆ ಸ್ಥಿತಿಗತಿಗಳ, ಅನಾವರಣಗೊಳಿಸಬೇಕಿದೆ,, ಸರ್ಕಾರದ ಕಣ್ಣು ತೆರೆಸಬೇಕಿದೆ, ಇವರೆಲ್ಲರ ಮನೆಮನೆಗೂ ಮೂಲಸೌಕರ್ಯ, ಒದಗಿಸಬೇಕಿದೆ,

ಈ ಸಮುದಾಯಗಳೆಲ್ಲವನ್ನು ಶೈಕ್ಷಣಿಕವಾಗಿ, ಉದ್ಯೋಗಿಕವಾಗಿ,ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸ್ಥಾನಮಾನಗಳನ್ನು ಕೊಟ್ಟು ಮುಖ್ಯ ವಾಹಿನಿಗೆ ತರಬೇಕಿದೆ


ಬನ್ನಿ *ಕುಳುವ ವಾಣಿ* ಯಲ್ಲಿ ಅಲೆಮಾರಿಗಳ ಒಂದೊಂದೇ ಸಮುದಾಯದ ಕಥೆಗಳನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.

Kuluvavaani

 Kuluvavaani 

Community

ಹಲಸೂರು ಗೇಟ್ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಂತರ್ ರಾಜ್ಯ ಕಳ್ಳನ ಬಂಧನ

ಬೆಂಗಳೂರು ನಗರ:-  28/09/2023 :ಹಲಸೂರು ಗೇಟ್ ಇನ್ಸ್ಪೆಕ್ಟರ್ ಹನಮಂತ ಕೆ ಭಜಂತ್ರಿ ಹಾಗೂ ಠಾಣೆ ಪೊಲೀಸರು ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ ಇಬ್ಬರನ್ನ...